ಹಿಂದೆಲ್ಲ ದುಂಡಗೆ(ದಪ್ಪವಾಗಿ) ಇರುವುದು ಬಹಳ ಲಕ್ಷಣ ಎಂದು ಭಾವಿಸುತ್ತಿದ್ದರು. ನಾವು ಅನುಕರಿಸುವ ಚಲನಚಿತ್ರದ ನಾಯಕಿಯರೂ ಸಹ ದುಂಡಗೆ ಮುದ್ದಾಗಿ ಇರುತಿದ್ದರು. ಆದರೆ ಇತ್ತೀಚಿನ ಮಾನದಂಡಗಳು ಬದಲಾಗಿವೆ. ಚಲನಚಿತ್ರಗಳ ನಾಯಕಿಯರು ತೆಳ್ಳಗೆ, ಬೆಳ್ಳಗೆ ಬಳುಕುತ್ತ ಇರಬೇಕು. ಅದೇ ಚೆಂದ ಎಂಬ ಭ್ರಮೆಯಲ್ಲಿ ನಾವಿದ್ದೇವೆ.
ದೇಹತೂಕವು ಬರಿ ಸೌಂದರ್ಯ ದ್ಯೋತಕವಲ್ಲ. ಬದಲಾಗಿ ಅದರಲ್ಲಿ ಆರೋಗ್ಯದ ಗುಟ್ಟಿದೆ. ನಮ್ಮ ಎತ್ತರಕ್ಕೆ ಅನುಗುಣವಾಗಿ ಸಮತೂಕವನ್ನು ಹೊಂದಿರುವುದು ಅನಿವಾರ್ಯವಾಗಿದೆ.
ಅಧಿಕ ತೂಕದ ದುಷ್ಪರಿಣಾಮಗಳು
* ಮಧುಮೇಹ ಮತ್ತು ಅಧಿಕ ರಕ್ತದೊತ್ತಡ
ಬರುವ ಹೆಚ್ಚಿನ ಸಾಧ್ಯತೆ ಇದೆ.
* ಸ್ವಲ್ಪ ಕೆಲಸ ಮಾಡಿದರೂ ಆಯಾಸವಾಗುತ್ತದೆ.
* ಕೀಳರಿಮೆ ಉಂಟಾಗುತ್ತದೆ.
* ಸೌಂದರ್ಯ ಕಡಿಮೆಯಾದಂತೆ ಅನಿಸುತ್ತದೆ.
* ಸಮತೋಲನ ತಪ್ಪಿ ಬೀಳುವ ಸಾಧ್ಯತೆ ಹೆಚ್ಚು.
ತೂಕ ನಿಯಂತ್ರಣ ಹೇಗೆ ಸಾಧ್ಯ?
* ನಿಯಮಿತವಾಗಿ ಆಹಾರ ಸೇವಿಸಬೇಕು.
* ವಯಸ್ಸಿಗೆ ಅನುಗುಣವಾಗಿ ವ್ಯಾಮಮ ಮಾಡಬೇಕು.
* ನಾರಿನಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು.
* ಕೊಬ್ಬಿನಾಂಶ ಹೆಚ್ಚಿರುವ ಕರಿದ ತಿಂಡಿ, ಹೊರಗಿನ ಆಹಾರದ ಮೇಲೆ ನಿಯಂತ್ರಣವಿರಬೇಕು.
* ಹೆಚ್ಚು ನೀರು ಸೇವಿಸಬೇಕು.
* ಸಿಹಿ ಪದಾರ್ಥ ಸೇವನೆಗೆ ಮಿತಿಯಿರಲಿ.
* ದುರಾಬ್ಯಾಸಗಳಿಂದ ದೂರವಿರಬೇಕು.
* ಬೆಳಿಗ್ಗೆ ಬೇಗ ಏಳಬೇಕು.
* ರಾತ್ರಿ ಬೇಗ ಮಲಗಬೇಕು.
* ದಿನವಿಡೀ ಚಟುವಟಿಕೆಯಿಂದ ಇರಬೇಕು.
* ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಬೇಕು.
ಸಮತೂಕ ನಿರ್ವಹಣೆಯ ಪ್ರಯೋಜನಗಳು
* ನಮಗೆ ಉತ್ತಮ ಆರೋಗ್ಯ ಹೊಂದಲು ಸಹಾಯಮಾಡುತ್ತದೆ.
* ನಮ್ಮಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
* ಚಟುವಟಿಕೆಯಿಂದ ಇರಲು ಸಹಾಯಮಾಡುತ್ತದೆ.
* ಆಕರ್ಷಕ ವ್ಯಕ್ತಿತ್ವ ಹೊಂದಲು ಕಾರಣವಾಗುತ್ತದೆ.
* ಬೇರೆಯವರ ಟೀಕೆಗಳಿಂದ ಸುರಕ್ಷಿತವಾಗಿರಲು ಸಾಧ್ಯ.
ಈ ರೀತಿ ಉತ್ತಮ ದೇಹ ತೂಕ ನಿರ್ವಹಣೆ ನಮ್ಮ ಸರ್ವತೋಮುಖ ಒಳಿತಿಗೆ ಕಾರಣವಾಗುತ್ತದೆ. ಆದ್ದರಿಂದ ಅತಿಯಾಗಿ ತಿನ್ನುವುದನ್ನು ಬಿಟ್ಟು, ಚಟುವಟಿಕೆಯಿಂದ ಇದ್ದು, ಸಮತೂಕ ಹೊಂದುವುದು ಅತೀ ಅಗತ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ