ತಾತ
ಗುರುನಮನ
ಬಾಳು ಹೀಗಿರಲಿ
ಬೀಜ ಮೊಳೆತು ಬೆಳೆಯಲಿ,
ಚಿಗುರು ಚಿಗುರಿ ಬಾಳಲಿ,
ಗಿಡ ಬೆಳೆದು ಮರವಾಗಲಿ,
ಹಕ್ಕಿ ಗೂಡು ಕಟ್ಟಲಿ,
ದಣಿದ ಜೀವ ಒರಗಲಿ ,
ಮರದ ತುಂಬ ಹೂವಿರಲಿ
ಬೆಳೆಬೆಳೆದು ಕಾಯಾಗಲಿ,
ಅದು ಬಲಿತು ಹಣ್ಣಾಗಲಿ,
ಹಣ್ಣು ಹಸಿವ ತಣಿಸಲಿ,
ಬಾಳು ಸಾರ್ಥಕವಾಗಲಿ.
ಹೆಣ್ಣಿಗೊಂದು ಮಗುವಿರಲಿ,
ಅದು ಹೆಣ್ಣಾಗಿರಲಿ,
ಅಥವಾ ಗಂಡಾಗಿರಲಿ,
ಅದು ಮುತ್ತಾಗಿರಲಿ,
ಸುಗುಣ ಸುಶೀಲವಾಗಿರಲಿ,
ಹೆತ್ತವರ ಕಣ್ಣಾಗಲಿ,
ಹೊಟ್ಟೆ ತಂಪಾಗಿಸಲಿ .
ಮಗುವಿನಂತ ಮನಸಿರಲಿ,
ಹೂವಿನಂತ ಕನಸಿರಲಿ ,
ಎಲ್ಲ ಒಳಿತು ಬಯಸುತಿರಲಿ ,
ಸದಾ ಕ್ರಿಯಾಶೀಲವಾಗಿರಲಿ,
ತಾ ನಕ್ಕು, ನಗಿಸುತಿರಲಿ ,
ಕಹಿಯೆಲ್ಲ ಮರೆತಿರಲಿ,
ನಿಮ್ಮೆಲ್ಲಾ ಸೌಂದರ್ಯ,
ಸಂಗಾತಿಗೆ ಮೀಸಲಿರಲಿ.
ಒಳಗಿರುವ ಬುದ್ಧಿ,
ಸತ್ಕರ್ಮಕ್ಕೆ ಮೀಸಲಿರಲಿ,
ಪಡೆದ ಅನುಭವ,
ಕರುಳಬಳ್ಳಿಗಳ ದಾರಿದೀಪವಾಗಿರಲಿ.
ಸೋಲದ ಛಲವಿರಲಿ,
ಸೋಲಿಸುವ ಬಲ ಬೇಡ,
ಕಣ್ಣಿeರು ಒರೆಸುವ,
ಮನಸು ನಿಮಗಿರಲಿ.
ಪರರ ಕನಸಿನ ಸಮಾದಿಯ ಮೇಲೆ,
ಅರಮನೆ ಕಟ್ಟುವ ಕ್ರೌರ್ಯ ಬೇಡ.
ಪರರ ತಟ್ಟೆಯ ಮೃಷ್ಟಾನ್ನಕ್ಕಿಂತ,
ನಮ್ಮದೇ ಬಟ್ಟಲಿನ ಗಂಜಿ ಮೇಲು.
ದೂರದ ಬೆಟ್ಟ ನುಣ್ಣಗೆ ಇರಬಹುದು,
ಹತ್ತಿರಕ್ಕೆ ಹೋದರೆ ನಿಜವು ತಿಳಿವುದು.
ಬದುಕು ಹೇಗೆe ಇರಲಿ,
ಪ್ರೀತಿಸುವ ಮನಸು ನಮಗಿರಲಿ.
ಪ್ರೀತಿಸುವ ಕನಸು ನಿಮಗಿರಲಿ..
ಹೃದಯವಂತರು
ವಿಚ್ಚೇದನಗಳ ಕಾರಣ,ಪರಿಹಾರ
ಹಿಂದಿನ ಕಾಲದಲ್ಲಿ ವಿಚ್ಚೇದನದ ಕಾರಣ ಮತ್ತು ಪರಿಣಾಮಗಳು
ಹಿಂದೆಲ್ಲ ಅವಿಭಕ್ತ ಕುಟುಂಬಗಳು ಇತ್ತು.ಮನೇ ತುಂಬಾ ಜನರಿದ್ದರು. ಮನೆಯ ಹಿರಿಯರು ಪ್ರತೀ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಮಾತು ಮೀರುವ ದೈರ್ಯ ಯಾರಿಗೂ ಇರಲಿಲ್ಲ.ಅದು ಬರೀ ಭಯ ಮಾತ್ರ ಅಲ್ಲ, ಗೌರವವೂ ಇತ್ತು. ಅಂತಹ ಕಾಲದಲ್ಲಿ ವಿಚ್ಛೇದನಗಳು ಬಲು ಅಪರೂಪ. ಕೆಲವೊಂದು ಬಾರಿ ಪರಿಸ್ಥಿತಿಗಳು ಕೈಮೀರಿ ಪತಿಪತ್ನಿ ದೂರಾಗುತ್ತಿದ್ದರು. ತಪ್ಪು ಯಾರದ್ದೇ ಆಗಿದ್ದರೂ, ಗಂಡ ಬಿಟ್ಟವಳು ಎಂಬ ಹಣೆಪಟ್ಟಿ ಹೆಣ್ಣಿನ ಪಾಲಿಗೆ ಕಾಯಂ ಆಗಿ ಇರುತಿತ್ತು. ಆಮೇಲಿನ ಅವಳ, ಅವಳ ಮಕ್ಕಳ ಜೀವನ ನರಕಸದೃಶ್ಯವಾಗಿರುತಿತ್ತು. ಅವಳಿಗೆ ತವರು ಮನೆಯಲ್ಲಿ ಯಾವ ಆದರವೂ ಸಿಗುತ್ತಿರಲಿಲ್ಲ. ಕಾರಣ,ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬುದು ಬರೀ ಗಾದೆಮಾತಾಗಿರದೆ ನಿಜವೆಂದೇ ನಂಬಿದ ಕಾಲವದು.ಅದು ಅನಿವಾರ್ಯವೂ ಆಗಿತ್ತು. ಮನೆ ತುಂಬ ಮಕ್ಕಳು. ಅವರ ಹೊಟ್ಟೆಬಟ್ಟೆ ನೋಡಿಕೊಳ್ಳುವುದೇ ದೊಡ್ಡ ಸಾಹಸ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಸಾಕಪ್ಪಾ ಸಾಕು, ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಅವರು ತಿರುಗಿ ಮನೆಗೆ ಬಂದರೆ ಹೇಗಿರಬೇಡ!? ಎಲ್ಲರೂ ಪರಿಸ್ಥಿತಿಯ ಕೈಗೊಂಬೆಗಳಾಗಿರುತಿದ್ದರು. ತಮ್ಮ ಮನೆಯ ವಾಸ್ತವ ಪರಿಸ್ಥಿತಿ ಅರಿತಿದ್ದ ಹೆಣ್ಣು ಮಕ್ಕಳು, ತವರು ಮನೆಯ ದಾರಿ ಮರೆತವರಂತೆ, ಎಲ್ಲ ಕಷ್ಟ ನುಂಗಿಕೊಂಡು, ಎಲ್ಲರ ಜೊತೆ ಹೊಂದಿಕೊಂಡು ಹೇಗೋ ಬಾಳುತ್ತಿದ್ದರು. ನೂರರಲ್ಲಿ ಒಬ್ಬರು ಸುಖವಾಗಿಯೂ ಇದ್ದರು.
ಇಂದಿನ ಕಾಲದ ವಿಚ್ಚೇದನಗಳ ಕಾರಣಗಳು
ಈಗ ಕಾಲ ಬದಲಾಗಿದೆ. ಎಲ್ಲೆಲ್ಲು ವಿಭಕ್ತ ಕುಟುಂಬಗಳು. ಓದಿ, ಕೆಲಸ ಪಡೆದು ಅಚ್ಚು ಕಟ್ಟಾಗಿ ಮನೆ ಮಾಡಿಕೊಂಡು ತಮ್ಮ ಪಾಡಿಗೆ ತಾವಿರುವ ಕುಟುಂಬಗಳು. ಒಂದೋ ಎರಡೋ ಮಕ್ಕಳು.
- ಅತಿ ಮುದ್ದಿನಿಂದ ಬೆಳೆಸಿ, ಓದಿಸಿ, ಬೇಕಾದ್ದು ಕೊಡಿಸಿ, ಕಷ್ಟ,ನಷ್ಟ, ಹೊಂದಾಣಿಕೆ ಅರಿಯದೆ ಬೆಳೆದ ಮಕ್ಕಳು, ಅದೇ ಜೀವನ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ.
- ತುಸು ಏರುಪೇರಾದರೂ ಸಹಿಸುವ ಶಕ್ತಿ ಅವರಿಗಿಲ್ಲ.
- ತನ್ನದೇ ಮಾತು ನಡೆಯಬೇಕೆಂಬ ಹಟ, ಅಹಂ.
- ಸಾಮಾಜಿಕ ಜಾಲತಾಣಗಳ ಪ್ರಭಾವಿತರಾಗಿ, ಚಂಚಲ ಮನಸಿನಿಂದ ಆಕರ್ಷಣೆ, ಆಮಿಷಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ.
- ಯಾವುದೇ ಮುಂದಾಲೋಚನೆ ಇಲ್ಲದೆ ಮಾಡಿದ ತಪ್ಪುಗಳಿಗೆ ಬೆಲೆ ತೆರುತ್ತಿದ್ದಾರೆ.
- ಕೆಲವೊಂದು ಬಾರಿ ಅತಿಯಾಸೆಗೆ ಬಲಿಯಾಗುತ್ತಾರೆ.
- ಪರಸ್ಪರರ ಬಗ್ಗೆ ಇರುವ ಅಪನಂಬಿಕೆಯೂ ವಿಚ್ಛೇದನದ ಪ್ರಮುಖ ಕಾರಣಗಳಲ್ಲಿ ಒಂದು.
- ಗಂಡ ಮತ್ತು ಮಕ್ಕಳು ಮಾತ್ರ ತನ್ನ ಸಂಸಾರ ಎನ್ನುವ ಸ್ವಾರ್ಥಿ ಹೆಣ್ಣುಮಕ್ಕಳು,
- ಮದುವೆ ಆದ ಮೇಲೆ ,ನೀನು ನಿನ್ನ ಮನೆಯವರನ್ನು ನಿನ್ನ ಸ್ವಂತಿಕೆಯನ್ನು ಮರೆತುಬಿಡು ಎನ್ನುವ ಗಂಡಸರು.
ವಿಚ್ಚೇದನವನ್ನು ಕಡಿಮೆ ಮಾಡಲು ಉಪಾಯಗಳು
- ಗಂಡು ಮಕ್ಕಳು ಹೆಣ್ಣನ್ನು ತನ್ನಂತೆ ಗೌರವಿಸಲು ಕಲಿಯಬೇಕು.
- ಅವರ ಆಸೆ ಆಕಾಂಕ್ಷೆಗಳನ್ನು ತಿಳಿದು ಅದಕ್ಕೆ ಬೆಂಬಲಿಸಬೇಕು.
- ಎಲ್ಲ ಕೆಲಸಗಳನ್ನು ಅವರ ಜೊತೆ ಹೊಂದಿಕೊಂಡು ಮಾಡಬೇಕು.
- ಹೆಣ್ಣು ಮಕ್ಕಳು, ತಮ್ಮ ಗಂಡನನ್ನು ಮತ್ತು ಅವರ ಮನೆಯವರನ್ನು ತಮ್ಮ ಸ್ವಂತದವರಂತೆ ಪ್ರೀತಿಸಲು, ಗೌರವಿಸಲು ಕಲಿಯಬೇಕು.
- ತಮ್ಮ ಗಂಡನ ಇತಿಮಿತಿಗಳನ್ನು ಅರಿತು ಅದಕ್ಕೆ ತಕ್ಕಂತೆ ಹೊಂದಿಕೊಂಡು ಬದುಕಬೇಕು.
- ಜೀವನಸಂಗಾತಿಯ ಭಾವನೆಗಳನ್ನು, ಅಭಿರುಚಿಗಳನ್ನು ಗೌರವಿಸಬೇಕು.
- ಬಿನ್ನಾಭಿಪ್ರಾಯಗಳು ಸಹಜ. ತನ್ನದೇ ಹಟ ಸಾದಿಸದೆ ಅನುಸರಿಸಿಕೊಂಡು ಹೋಗಬೇಕು.
- ಯಾವುದೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ, ತಮ್ಮ ಹೆತ್ತವರ ಬಗ್ಗೆ, ಮಕ್ಕಳ ಭವಿಷ್ಯದ ಬಗ್ಗೆ ಸರಿಯಾಗಿ ಯೋಚಿಸಬೇಕು.
- ತಮ್ಮ ಒಂದು ನಿರ್ಧಾರದಿಂದ ಆಗುವ ಪರಿಣಾಮಗಳ ಬಗ್ಗೆ ಸರಿಯಾಗಿ ಯೋಚಿಸಬೇಕು.
ಹದಿಹರೆಯ- ಮಕ್ಕಳು ಮತ್ತು ಹೆತ್ತವರು
- "ಹುಚ್ಚುಕೋಳಿ ಮನಸ್ಸು, ಅದು ಹದಿನಾರರ ವಯಸ್ಸು" ಹಾಡಿನ ಸಾಲಿನಂತೆ, ಮಕ್ಕಳ ಮನಸ್ಸು ಸೂಕ್ಷ್ಮವಾಗಿ, ಚಂಚಲವಾಗಿ, ಮುಗ್ದವಾಗಿ, ಅಪಕ್ವವಾಗಿ ಇರುತ್ತದೆ.
- ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯುವ ತಾಳ್ಮೆಯಾಗಲಿ,ಪ್ರಬುದ್ಧತೆಯಾಗಲಿ ಅವರಿಗಿರುವುದಿಲ್ಲ.
- ಬುದ್ಧಿಮಾತು ಕೇಳುವ ಮನಸ್ಥಿತಿಯೂ ಅವರಿಗಿರುವುದಿಲ್ಲ.
- ನಾವು ಏನಾದ್ರೂ ಹೇಳಲು ಹೋದರೆ, ಒಂದೋ ಸುಮ್ಮನಿರುತ್ತಾರೆ, ಅಥವಾ ಕೇಳದವರಂತೆ ನಟಿಸುತ್ತಾರೆ, ಅಥವಾ ನನಗೆ ಏನೂ ಹೇಳಲು ಬರಬೇಡಿ ಎನ್ನುತ್ತಾರೆ.
- ಆ ಕಡೆ ದೊಡ್ಡವರೂ ಅಲ್ಲ, ಈ ಕಡೆ ಸಣ್ಣವರೂ ಅಲ್ಲ. ಅವರಿಗೆ ಏನು ಹೇಳಬೇಕು, ಹೇಗೆ ಹೇಳಬೇಕು, ಎಷ್ಟು ಹೇಳಬೇಕು ಎಂದು ತಿಳಿಯದೆ ಅಪ್ಪ ಅಮ್ಮ ಗೊಂದಲಕ್ಕೆ ಒಳಗಾಗುತ್ತಾರೆ.
- ಅವರು ಗಳಿಸಿದ ಎಲ್ಲ ಅನುಭವಗಳನ್ನು ಉಪಯೋಗಿಸಿದರೂ, ಈ ಮಕ್ಕಳನ್ನು ಸಂಭಾಳಿಸುವುದು ಹೇಗೆ ಎಂದು ತಿಳಿಯುದಿಲ್ಲ.
- ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು, ಅದಕ್ಕೆ ಹೊಂದಿಕೊಳ್ಳಲು ಅವರು ಹರಸಾಹಸ ಪಡುತ್ತಿರುತ್ತಾರೆ.
- ಒಂದು ಕಡೆ ಬೇರೆ ಬೇರೆ ರೀತಿಯ ಆಕರ್ಷಣೆಗಳು ಅವರನ್ನು ಸೆಳೆಯುತ್ತವೆ.
- ಓದುವ ಒತ್ತಡಗಳು ಹೆಚ್ಚಿರುತ್ತವೆ
- ಹೆತ್ತವರ ನಿರೀಕ್ಷೆಗಳನ್ನು ಮುಟ್ಟಲು ಆಗುವುದಿಲ್ಲ
- ತಾವು ಚೆನ್ನಾಗಿ ಕಾಣಬೇಕೆಂಬ ಯೋಚನೆಗಳುಕಾಡುತ್ತವೆ.
- , ಸಾಮಾಜಿಕ ಜಾಲತಾಣಗಳ ಪ್ರಭಾವ ಬಹಳ ಇರುತ್ತವೆ.
- ಸ್ನೇಹಿತರು ಮತ್ತು ಪರಿಸರದ ಪ್ರಭಾವಗಳು ಅವರನ್ನು ಹೈರಾಣಾಗಿಸುತ್ತವೆ.
- ಇವೆಲ್ಲದರ ನಡುವೆ ಸಮತೋಲನ ಸಾದಿಸುವಷ್ಟು ಅವರಿನ್ನೂ ಪಳಗಿರುವುದಿಲ್ಲ.
- ಮಕ್ಕಳ ಮನಸನ್ನು ಅರಿಯುವುದು ಬಹಳ ಮುಖ್ಯ.
- ನಾವು ಅವರ ವಯಸ್ಸಿನಲ್ಲಿ ಹೇಗಿದ್ದೇವೋ ಹಾಗೆ ಅವರು ಇರಲು ಆಗುವುದಿಲ್ಲ. ಕಾಲ ಬದಲಾಗಿದೆ. ಮಕ್ಕಳೂ ಬದಲಾಗಿದ್ದಾರೆ.ನಾವೂ ಬದಲಾಗಬೇಕಿದೆ.
- ನಮ್ಮ ಕಾಲದ ಕಟ್ಟುನಿಟ್ಟಿನ ನಿಯಮಗಳು ಈಗಿನ ಕಾಲಕ್ಕೆ ಪೂರ್ತಿಯಾಗಿ ಹೊಂದಿಕೊಳ್ಳುವುದಿಲ್ಲ. ಆದ್ದರಿಂದ ಅಗತ್ಯ ಬದಲಾವಣೆ ಮಾಡಿಕೊಂಡು, ಮಕ್ಕಳಿಗೆ ಅದನ್ನು ಪಾಲಿಸುವಂತೆ ಹೇಳಬೇಕು.
- ಮಕ್ಕಳಿಗೆ ಅತಿಯಾಗಿ ಮುದ್ದು ಮಾಡದೆ, ಸಣ್ಣವರಿರುವಾಗಲೇ ತಿದ್ದಿ ಬುದ್ಧಿ ಹೇಳುವುದನ್ನು ಅಭ್ಯಾಸ ಮಾಡಬೇಕು.
- ಜೋರು ಮಾಡಿಯೇ ಹೇಳಬೇಕು ಎಂದೇನಿಲ್ಲ. ಮೃಧುವಾಗಿ, ಸಮಾಧಾನದಿಂದ ಬುದ್ಧಿ ಹೇಳಿದರೆ ಮಕ್ಕಳು ಖಂಡಿತ ಕೇಳುತ್ತಾರೆ.
- ಗುರುಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂದು ನಾವು ನಡೆದು ಅವರಿಗೆ ತೋರಿಸಬೇಕಿದೆ.
- ದೇವರಮೇಲಿನ ನಂಬಿಕೆ ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎಂದು ತಿಳಿಸಬೇಕಿದೆ.
- ಶಿಸ್ತು, ಶ್ರದ್ಧೆ,ಪರಿಶ್ರಮಗಳು ಸಾಧನೆಗೆ ಅಡಿಪಾಯ ಎಂದು ಅವರಿಗೆ ತಿಳಿಸಬೇಕಿದೆ.
- ಹಣದ ಬೆಲೆ ಏನು? ಗುಣದ ಬೆಲೆ ಏನು? ಎನ್ನುವುದು ಅವರಿಗೆ ಅರ್ಥವಾಗಬೇಕಿದೆ.
- ಸರಿ ತಪ್ಪುಗಳ ವ್ಯತ್ಯಾಸ ಅರ್ಥಮಾಡಿಸಬೇಕಿದೆ.
- ಸೂಕ್ಷ್ಮ ಸಂವೇದನೆಗಳನ್ನು ಕಲಿಸಬೇಕಿದೆ.
- ಹೊಂದಿಕೊಳ್ಳುವ ಗುಣವೂ ಬಹಳ ಮುಖ್ಯ.
- ಮನೆಯ ಕೆಲಸಗಳನ್ನೂ ಮಾಡುವ ತಿಳುವಳಿಕೆ,ಆಸಕ್ತಿ, ಜಾಣ್ಮೆಯೂ ಅವರಿಗೆ ಅಗತ್ಯವಿದೆ.
ಮಳೆ ಕೈಗೆ ಸಿಗದ ಮಾಯಾಮೃಗವಾಗದೆ ಇರಲಿ
ಮಾರ್ಜಾಲ ಮಾಯೆ
ಬೆಕ್ಕುಗಳೆಂದರೆ ಯಾರಿಗೂ ಅಷ್ಟೇನೂ ಒಲವಿಲ್ಲ. ಅವುಗಳ ಅಂತರಂಗ ಅರಿವಾದರೆ ತಾನೇ! , ಇಷ್ಟವಾಗುವುದು. ಅವೇನೂ ಕೃತಘ್ನ ಪ್ರಾಣಿಗಳಲ್ಲ.. ಅನ್ನ ಕೊಡುವ ಕೈಯನ್ನು ಅದು ಮರೆಯುವುದಿಲ್ಲ. ಮುಖ ನೋಡಿ ಗುರುತಿಸಿ ಮಿಯಾಂ ಎಂದು ಕೂಗಿ, ಹಿಂಬಾಲಿಸಿ, ಬಾಯಿ ಅಗಲಿಸಿ ನಮ್ಮನ್ನು ಖುಷಿ ಪಡಿಸುವ ಅವುಗಳ ಮೂಕ ಪ್ರೇಮ ಮನ ತಣಿಸುತ್ತದೆ.. ಸಮಯವಾಗಿದೆ ಎಂದು, ಕೂಗಿ ನಿದ್ದೆಯಿಂದ ಎಬ್ಬಿಸಿ, ನಮ್ಮ ಹಿಂದೆ ಬಂದು ಹಾಲು ಕೊಡು ಎಂದು ಪಾತ್ರೆಯತ್ತ ನೋಡುತ್ತವೆ. ನಿಜ ತಾನೆ.. ನಾವು ಎಷ್ಟು ಹೊತ್ತಿಗೆ ಎದ್ದೇಳುತ್ತೇವೆ?, ಏನೇನು ಮಾಡುತ್ತೇವೆ ಪ್ರತಿಯೊಂದನ್ನೂ ಅವು ನೆನಪಿಟ್ಟುಕೊಳ್ಳುತ್ತವೆ. ಅದಕ್ಕೆ ಸರಿಯಾಗಿ ಹೊಂದಿಕೊಂಡು ನಡೆದುಕೊಳ್ಳುತ್ತವೆ.
ಊಟದ ತಟ್ಟೆಯ ಮುಂದೆ ಮೌನವಾಗಿ ಕುಳಿತು ನಮ್ಮ ಮುಖ ನೋಡಿದರೆ , ಹಸಿವಾಗುತ್ತಿದೆ, ಅನ್ನ ಹಾಕಿ ಎಂದು ಅರ್ಥ. ನೀರಿನ ಪಾತ್ರೆಯ ಹತ್ತಿರ ಕೂತು ಮಿಯಾವ್ ಎಂದರೆ ನೀರು ಬೇಕು ಎಂದರ್ಥ. ಯಾವ ಸಮಯದಲ್ಲಿ ಯಾರು ಯಾವ ತಿಂಡಿ ಕೊಡುತ್ತಾರೋ ಅವರ ಬಳಿ ಹೋಗಿ ಅದೇ ತಿಂಡಿಗಾಗಿ ಕೂಗುತ್ತವೆ ಇಲ್ಲ ಹಿಂಬಾಲಿಸುತ್ತವೆ.
ಸಸ್ಯಾಹಾರಿಗಳ ಮನೆಯಲ್ಲಿ ಹಾಲು ಮೊಸರು ತಿಂದು ನೆಮ್ಮದಿಯಾಗಿ ಇರುವ ಅವು ಮಾಂಸಾಹಾರಿಗಳ ಮನೆಯಲ್ಲಿ ಮೀನಿನ ಪುಚ್ಚೆ ಎಂದು ಕರೆಸಿಕೊಳ್ಳುತ್ತವೆ. ಪರಿಸರಕ್ಕೆ ಹೊಂದಿಕೊಂಡು ಬಾಳುವ ಗುಣ ಅವುಗಳ ರಕ್ತದಲ್ಲೇ ಇದೆ. ಮರಿಗಳನ್ನು ಕೈಯಲ್ಲಿ ಹಿಡಿದು ಅಭ್ಯಾಸ ಮಾಡಿದರೆ ಅವು ನಮ್ಮಲ್ಲಿ ಹೆಚ್ಚು ವಿಶ್ವಾಸದಿಂದ ಇರುತ್ತವೆ. ಇಲ್ಲವಾದರೆ ನಮ್ಮಿಂದ ದೂರವೇ ಇರುತ್ತವೆ. ಸಣ್ಣ ಮರಿಗಳು ಮನೆಯೊಳಗೆ ಚಿಚ್ಚಿ ಸುಸ್ಸು ಮಾಡುತ್ತವೆ.ದೊಡ್ಡವಾದ ಮೇಲೆ ಹೊರೆಗೆ ಹೋಗುತ್ತವೆ.
ಕೆಲವೊಂದು ಉಪದ್ರವಕಾರಿ ಬೆಕ್ಕುಗಳೂ ಇರುತ್ತವೆ.ಕದ್ದು ಹಾಲು ಕುಡಿಯುವುದು, ಮೀನು ತಿನ್ನುವುದು, ಜಗಳವಾಡುವುದು, ಮರಿಗಳನ್ನು ತಿನ್ನುವುದು ಮಾಡುತ್ತವೆ.
ಅದೇನು ಇರಲಿ ಮುದ್ದು ಮಾಡಿದರೆ ಮನೆಮಕ್ಕಳಂತೆ ಇರುತ್ತವೆ. ಅವುಗಳ ಜೊತೆ ಮಾತನಾಡುವುದು, ಆಟವಾಡುವುದು ನಮ್ಮ ಒತ್ತಡಗಳಿಂದ ಹೊರಬಂದು ನೆಮ್ಮದಿಯಾಗಿ ಇರಲು ಸಹಾಯಮಾಡುತ್ತದೆ.
ಕೂದಲು ಉದುರುವಿಕೆಗೆ ಕಾರಣ, ಪರಿಹಾರ
- ಕೆಲವೊಂದು ಔಷಧಗಳ ಬಳಕೆ, ಉದಾಹರಣೆಗೆ ಕಾನ್ಸರ್ ಚಿಕಿತ್ಸೆ, ಹಾರ್ಮೋನ್ ಚಿಕಿತ್ಸೆಗಳು ಇತ್ಯಾದಿ.
- ನೀರಿನ ಬದಲಾವಣೆ (ಹಳ್ಳಿಯಲ್ಲಿದ್ದವರು ಪಟ್ಟಣಕ್ಕೆ ಹೋದಾಗ, vice versa)
- ಹವಾಮಾನ ಬದಲಾವಣೆ,(ಮಳೆಗಾಲ, ಚಳಿಗಾಲ)
- ಒತ್ತಡದಿಂದ (ಚಿಂತೆಯಿಂದ ಆರೋಗ್ಯ ಹಾಳಾಗುತ್ತದೆ)
- ಜೀವನಶೈಲಿಯ ಬದಲಾವಣೆ,(ಆಹಾರ ನಿದ್ದೆಯಲ್ಲಿ ವ್ಯತ್ಯಾಸ)
- ಥೈರಾಯ್ಡ್ ಸಮಸ್ಯೆ ಕೂಡ ಕೂದಲಿನ ಸಮಸ್ಯೆಗೆ ಒಂದು ಕಾರಣ.
- ಅನುವಂಶೀಯ ಕಾರಣಗಳು(ಹೆತ್ತವರಲ್ಲಿ,ಒಡಹುಟ್ಟಿವರಲ್ಲಿ ಕಡಿಮೆ ಕೂದಲು ಇರುವಾಗ).
- ವಯಸ್ಸಿನ ಕಾರಣ(ನಲವತ್ತರ ನಂತರ ಕೂದಲು ತೆಳ್ಳಗಾಗುತ್ತದೆ)
- ಸೊಪ್ಪು,ತರಕಾರಿಗಳ ಸೇವನೆ ಬಹಳ ಮುಖ್ಯ.
- ವಾರದಲ್ಲಿ ಎರಡು ಮೂರು ಬಾರಿ ತಲೆ ಸ್ನಾನ ಮಾಡಬೇಕು.
- ಸ್ನಾನದ ಮೊದಲು ನಮಗೆ ಸರಿಹೊಂದುವ ಎಣ್ಣೆ ಹಚ್ಚಿ ಮಾಲೀಸು ಮಾಡಬೇಕು.
- ಸ್ನಾನದ ನೀರು ಹೆಚ್ಚು ಬಿಸಿ ಇರಬಾರದು.
- ಸೌಮ್ಯವಾದ, ಅಲ್ಪ ಪ್ರಮಾಣದ ಶಾಂಪೂ ಬಳಸಬೇಕು.
- ಒದ್ದೆ ತಲೆಯನ್ನು ಬಾಚಬಾರದು.
- ಬಾಚಣಿಗೆಯನ್ನು ಆಗಾಗ ಸ್ವಚ್ಚಗೊಳಿಸಿ ಉಪಯೋಗಿಸಬೇಕು.
- ಚೆನ್ನಾಗಿ ನೀರು ಕುಡಿಯಬೇಕು.
- ಕೂದಲು ಯಾಕೆ ಉದುರುತ್ತಿದೆ ಎಂಬುದರ ಕಾರಣ ತಿಳಿದರೆ ಪರಿಹಾರವೂ ಸುಲಭ.
- ಕೆಲವೊಂದು ಸಮಯದಲ್ಲಿ ಕೂದಲು ಸಹಜವಾಗಿಯೇ ಹೆಚ್ಚು ಉದುರುತ್ತದೆ. ಉದಾಹರಣೆಗೆ, ಮಳೆಗಾಲದಲ್ಲಿ ಸಹಜವಾಗಿ ಕೂದಲು ಉದುರುತ್ತದೆ. ಮತ್ತು ಆ ಜಾಗದಲ್ಲಿ ಹೊಸ ಕೂದಲು ತಾನಾಗಿ ಹುಟ್ಟುತ್ತದೆ.
- ತುಂಬಾ ಕಡಿಮೆ ಸಮಯದಲ್ಲಿ, ಹೆಚ್ಚು ಹೆಚ್ಚು ಕೂದಲು ಉದುರಿದರೆ ಮಾತ್ರ ಸಮಸ್ಯೆ. ಸಮಸ್ಯೆಗಳು ತೀವ್ರವಾಗಿದ್ದರೆ, ವೈದ್ಯರನ್ನು ಕಾಣಬೇಕು.
- ತಲೆಹೊಟ್ಟು ಉಂಟಾದರೆ ಮೆಂತೆ ಅಥವಾ ದಾಸವಾಳದ ಹೇರ್ ಪ್ಯಾಕ್ ಮಾಡಿ.
- ವಿಗ್ ಧರಿಸಬಹುದು.
- ತಲೆಯನ್ನು ಪೂರ್ತಿ ಬೋಳಿಸಿ, ಹೊಳೆಯುವ ದುಂಡಗಿನ ತಲೆಯನ್ನು ಹೊಂದಿರುವುದು ಈಗಿನ ಟ್ರೆಂಡ್.
- ಹಣಕಾಸಿನ ಅನುಕೂಲವಿದ್ದವರು, ಕೂದಲು ಕಸಿ ಮಾಡಿಸಿಕೊಳ್ಳಬಹುದು.
ನಗು ಮಗುವಿನಂತೆ ಇರಲಿ
- ಅಪರಿಚಿತರನ್ನೂ ಪರಿಚಿತರನ್ನಾಗಿ ಮಾಡಲು ಒಂದು ಮುಗ್ಧ ನಗು ಸಾಕು.
- ಎಷ್ಟೋ ಸಲ ಒಂದು ನಗು ಸ್ನೇಹಿತರನ್ನು, ಆತ್ಮೀಯರನ್ನು ಗಳಿಸಿಕೊಡುತ್ತದೆ .
- ಹಾಗೇ ಕಡಿದುಹೋದ ಸಂಬಂಧಗಳನ್ನು ಜೋಡಿಸಲು ಒಂದು ಕಿರುನಗೆ ಸಾಕು. ಎಲ್ಲ ಸಿಟ್ಟು ಕರಗಿ ನೀರಾಗಿ ಬಿಡುತ್ತದೆ.
- ಹಳೆಯದೆಲ್ಲ ಮರೆತು ಸ್ನೇಹ ಪ್ರೀತಿ ಮತ್ತೆ ನೀರಿನಂತೆ ಹರಿಯಲಾರಂಭಿಸುತ್ತದೆ.
- ಪುಟ್ಟ ಮಕ್ಕಳ ಮುಗ್ಧನಗುವಿನಲ್ಲಿ ಯಾವುದೇ ಕಲ್ಮಶಗಳಿಲ್ಲ. ಅದು ಎಲ್ಲರಲ್ಲೂ ಹೊಸದೊಂದು ಹುರುಪನ್ನು ಖುಷಿಯನ್ನೂ ತುಂಬುತ್ತದೆ.
- ವಯೋವೃದ್ಧರು ತಮ್ಮ ಬೊಚ್ಚು ಬಾಯಿ ಅಗಲಿಸಿ ನಕ್ಕರೆ, ಮನತುಂಬಿ ಬರುತ್ತದೆ.
- ಹಲವಾರು ಬಾರಿ, ನಗು ಒಂದು ಸಾಂತ್ವಾನದಂತೆ ಕೆಲಸ ಮಾಡುತ್ತದೆ.
- ಯಾರಾದರೂ ದುಃಖದಲ್ಲಿದ್ದಾಗ, ಏನು ಹೇಳಬೇಕೆಂದು ತಿಳಿಯದೆ ಒದ್ದಾಡುವಾಗ, ಸಣ್ಣನಗುವೊಂದು ನಮ್ಮ ಮನದ ಭಾವನೆಯನ್ನು ಅವರಿಗೆ ದಾಟಿಸುತ್ತದೆ.
- ನಮ್ಮ ನಗು ಮನಸಿನ ಕನ್ನಡಿಯಂತೆ ವರ್ತಿಸುತ್ತದೆ. ಬುದ್ಧಿವಂತರು ಆ ನಗುವಿನ ಅರ್ಥವನ್ನು ಗುರುತಿಸಬಲ್ಲರು.
- ಇನ್ನೊಬ್ಬರನ್ನು ನೋಡಿ ಅಪಹಾಸ್ಯ ಮಾಡಿ ನಗುವುದು,
- ವ್ಯಂಗ್ಯವಾಗಿ ನಗುವುದು,
- ಅಹಂಕಾರದಿಂದ ನಗುವುದು,
- ಅಸೂಯೆಯಿಂದ ನಗುವುದು
ಅಂಬರ ತಾರೆ
CBSC ಯಿಂದ ಸ್ಟೇಟ್ ಬೋರ್ಡ್ ಗೆ
ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSC ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...
-
ಹೇಳಿದ್ದು ಕೇಳಲು ಒಲವಿಲ್ಲದರಿಗೆ, ಕೇಳಿದರೂ ಉತ್ತರಿಸಲು ಇಚ್ಚೆಯಿಲ್ಲದರಿಗೆ, ಹೇಳಲು ಉತ್ತರವೇ ಇಲ್ಲದವರಿಗೆ, ಕೇಳಿ ಕೇಳಿ ಸುಸ್ತಾದವರಿಗೆ, ಕೇಳಿದ್ದನ್ನು ಈಡೇರಿಸಲಾಗದವರಿಗ...
-
ಕಲಿತ ವಿದ್ಯೆಯ ಮರೆತು, ಕೋಟಿ ವಿದ್ಯೆಯ ಕಲಿತು, ಬದುಕಿನ ಸಾಗರದಿ ಈಜು ಕಲಿಯುತ್ತಾ, ಬಂದ ಅಲೆಯ ಜೊತೆ ಒಂದಾಗಿ, ತೇಲುತ್ತ ಮುಳುಗುತ್ತ , ಕನಸಿನ ಹರಿಗೋಲು ಹಿಡಿದು, ಸೋಲದಾ ಛ...
-
ನಾನಿನ್ನೂ ಮರೆತಿಲ್ಲ, ಅತ್ತಾಗ ಹೆಗಲಾದವರನು, ಬಿರುಬಿಸಿಲಿಗೆ ನೆರಳಾದವರನು, ಕಲ್ಲುಮುಳ್ಳಿನ ದಾರಿಯಲ್ಲಿ ಜತೆ ನಡೆದವರನು, ಒಳಿತು ಬಯಸಿದವರನು, ಕತ್ತಲಲಿ ದಾರಿತೋರಿದವರನು, ...