ಚೆನ್ನಾಗಿ ಅಡುಗೆ ಮಾಡಲು ಅಗತ್ಯ ಅಂಶಗಳು
* ಆಸಕ್ತಿ ಬಹಳ ಮುಖ್ಯ.
* ಅಡುಗೆಯ ಬಗ್ಗೆ ಪ್ರೀತಿ, ಗೌರವ ಇರಬೇಕು
* ಸಮಯಪರಿಪಾಲನೆ ಅಗತ್ಯವಾಗಿದೆ.
* ಪದಾರ್ಥಗಳ ಗುಣವಿಶೇಷತೆಗಳ ಪರಿಚವಿರಬೇಕು. ಉದಾಹರಣೆಗೆ, ಒಂದು ತರಕಾರಿ ಯಾವ ರುಚಿ ಹೊಂದಿದೆ,? ಅದನ್ನು ಇನ್ನಷ್ಟು ರುಚಿ ಮಾಡಲು ಯಾವ ಪದಾರ್ಥ ಉಪಯೋಗಿಸಬೇಕು? ಇತ್ಯಾದಿ.
* ಉಪ್ಪು, ಹುಳಿ, ಖಾರ ಗಳು ಸಂತೋಲನದಲ್ಲಿರಬೇಕು.
*ರುಚಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಸರಿಮಾಡುವಷ್ಟು ತಿಳುವಳಿಕೆ ಬೇಕು.
* ತಾಳ್ಮೆ ಬಹಳ ಮುಖ್ಯ.
* ನಿಧಾನ ಉರಿಯಲ್ಲಿ ಅಡುಗೆ ಮಾಡುವುದರಿಂದ ರುಚಿ ಹೆಚ್ಚುತ್ತದೆ.
* ಮಸಾಲೆ ಪದಾರ್ಥಗಳನ್ನು ಚೆನ್ನಾಗಿ ಹುರಿದು ಉಪಯೋಗಿಸಬೇಕು.
*ತರಕಾರಿ ತಾಜವಾಗಿದ್ದಾಗ ರುಚಿ ಹೆಚ್ಚಿರುತ್ತದೆ.
* ಅನಿವಾರ್ಯವಾದಾಗ ಮಾತ್ರ ಕುಕ್ಕರ್ ಬಳಸಬೇಕು.
* ಮಣ್ಣಿನ ಪಾತ್ರೆಗಳು ಅಡುಗೆಯ ರುಚಿ ಹೆಚ್ಚಿಸುತ್ತವೆ.
*ಕಬ್ಬಿಣದ ಪಾತ್ರೆಗಳಲ್ಲಿ ಮಾಡಿದ ದೋಸೆ, ಪಡ್ಡು, ಚಾಪಾತಿಗಳು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು.
* ಮೈದಾ, ಸಕ್ಕರೆಗಳನ್ನು ಮಿತಿಯಲ್ಲಿ ಬಳಸುವುದು ಉತ್ತಮ.
* ಫ್ರಿಡ್ಜಿನಲ್ಲಿ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಉಪಯೋಗಿಸುವುದು ಒಳ್ಳೆಯದಲ್ಲ. ತಾಜಾ ಆಹಾರ ಪದಾರ್ಥಗಳು ಬಿಸಿಯಾಗಿದ್ದಾಗಲೇ ಸೇವಿಸಬೇಕು.
*ಅತಿಯಾಗಿ ಮಸಾಲೆ ಪದಾರ್ಥಗಳನ್ನು ಉಪಯೋಗಿಸಬಾರದು. ಅವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
*ಅಡುಗೆ ಮಾಡುವಾಗ ಮನಸ್ಸು ಶಾಂತವಾಗಿರಬೇಕು.
ಅಡುಗೆ ತಯಾರಿ ಮನೆಯ ಹೆಣ್ಣು ಮಕ್ಕಳ ಜವಾಬ್ದಾರಿ ಎನ್ನುವ ಕಾಲವೊಂದಿತ್ತು. ಈಗ ಹೆಣ್ಣು ಮಕ್ಕಳೂ ಹೊರಗೆ ದುಡಿಯುತ್ತಿದ್ದಾರೆ. ಆದ ಕಾರಣ ಮನೆಯವರೆಲ್ಲ ಸೇರಿ ಅಡುಗೆ ಮಾಡಿದರೆ ಒತ್ತಡವೂ ಕಡಿಮೆಯಾಗುತ್ತದೆ. ಮನೆಯವರ ನಡುವೆ, ಬಾಂಧವ್ಯ, ಹೊಂದಾಣಿಕೆ ಹೆಚ್ಚಾಗುತ್ತದೆ.